Thursday, January 22, 2015

Dikshitar's Navagraha Krithis and theie scientific significance- Brihaspate(JUPITER)(Kannada Translation)

                                    ಬೃಹಸ್ಪತೇ
 ರಾಗ-ಅಠಾಣ                                                      ತಾಳ-ತ್ರಿಪುಟ

ನಮ್ಮ ಜೀವನದಲ್ಲಿ ಗುರುಬಲ ಒಂದಿದ್ದರೆ ಪ್ರಮುಖ ಘಟ್ಟಗಳನ್ನು ಸುಲಭವಾಗಿ ಧಾಟಬಹುದು.
ಬೃಹಸ್ಪತಿಯ ಶಕ್ತಿ ಮತ್ತು ಪರಿಣಾಮಗಳು ವೈಜ್ನಾನಿಕವಾಗಿ ಏನೆಂಬುದನ್ನು ಈ ಕೃತಿಯ ಮೂಲಕ ಅರ್ಥೈಸಿಕೊಳ್ಳಬಹುದು.

ಮಹಾಬಲವಿಭೋ

ವೈಜ್ನಾನಿಕ ಹಿನ್ನೆಲೆ: ’ಬೃಹಸ್ಪತಿ’ ಸೌರಮಂಡಲದ ಅತಿ ದೊಡ್ಡ ಗ್ರಹ. ಅದರಲ್ಲಿರುವ ’ಗುರುತ್ವ’ ಮಿಕ್ಕ ಗ್ರಹಗಳಿಗಿಂತ ೨.೫ ಪಟ್ಟು ಹೆಚ್ಚು. ಇದರ ಕಾರಣದಿಂದ ಸುಮಾರು ೬೩ ನೈಸರ್ಗಿಕ ಉಪಗ್ರಹಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಅಪಾರ.

ನಿರಾಶನ್ಯಮಖಪ್ರದಾತ್ರೆ ಸುಖಪ್ರದಾತ್ರೆ: ಸಂತೋಷ ಹಾಗು ಚೇತನಾಶಕ್ತಿಯನ್ನು ಮೂಡಿಸುವ

ವೈಜ್ನಾನಿಕ ಹಿನ್ನೆಲೆ:
ಸೂರ್ಯ ರಶ್ಮಿಯ ವರ್ಣಪಟಲವನ್ನು ವೀಕ್ಷಿಸಿದರೆ, ಒಂದೊಂದು ಗ್ರಹವು ಒಂದೊಂದು ವರ್ಣ/ಬಣ್ಣಕ್ಕೆ ಸಂಬಂಧಪಟ್ಟಂತಿದೆ.
ಹೀಗೆ  VIBGYOR ಎಂಬ ವರ್ಣಪಟಲದಲ್ಲಿ, ಬೃಹಸ್ಪತಿ    ಎಂದರೆ ಹಳದಿ ಬಣ್ಣವನ್ನು ಪ್ರತಿಬಿಂಬಿಸುವುದರಿಂದ, ಅವನು ಹಳದಿ ತರಂಗಾಂತರದ ಅಧಿಪತಿ.
ಆಧುನಿಕ ಭಾರತೀಯ ವಿಜ್ನ್ಯಾನದ ಸಂಶೋಧನೆಗಳ ಪ್ರಕಾರ ಹಳದಿ ಬಣ್ಣದ ಚಿಕಿತ್ಸೆಯಿಂದ ರೋಗಿಗಳು ಅನೇಕ ಮನೋರೋಗಗಳಿಂದ ಮುಕ್ತರಾಗಿದ್ದಾರೆ.

’ GEM THERAPY’ ಎಂಬ ಚಿಕಿತ್ಸಾಕ್ರಮದಲ್ಲಿ,

’ YELLOW SAPPHIRE’ ಎಂಬ ರತ್ನಮಣಿಯನ್ನು, ನಮ್ಮ ದೇಹಕ್ಕೆ ಸ್ಪರ್ಷಿಸುವಂತೆ ಧರಿಸಿದರೆ, ’ಗುರು ಗ್ರಹ’ದಿಂದ ಹೊರಹೊಮ್ಮುವ ಹಳದಿ ಕಾಸ್ಮಿಕ್ ಬಣ್ಣವನ್ನು, ಈ ಮಣಿಯು ಹೀರಿಕೊಂಡು, ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದೆಂಬ ನಂಬಿಕೆ ಹಾಗು ದಾಖಲೆಗಳು ಇವೆ.

2 comments:

  1. Kindly post in English madam. Extremely useful thanks a lot for the kind efforts

    ReplyDelete
  2. Just found it. Thanks u so much.

    ReplyDelete