Sunday, July 13, 2014

Dikshitar's Navagraha Krithis and their scientific significance-SuryaMurthe NaMosthuThe((Kannada Translation)

 ಸೂರ್ಯಮೂರ್ತೆ ನಮೋಸ್ತುತೆ
ರಾಗ-ಸೌರಾಷ್ಟ್ರ                                          ತಾಳ-ಚತುರಶ್ರ ಧ್ರುವ
ಸೂರ್ಯಮೂರ್ತೆ ನಮೋಸ್ತುತೆ ಸುಂದರ ಛಾಯಾಧಿಪತೆ
ಕಾರ್ಯಕಾರಣಾತ್ಮಕಜಗತ್ಪ್ರಾಕಾಶ ಸಿಂಹರಾಶ್ಯಾಧಿಪತೆ ಆರ್ಯವಿನುತ ತೇಜಸ್ಫೂರ್ತೆ ಆರೋಗ್ಯಾದಿಫಲದಕೀರ್ತೆ
ಸಾರಸಮಿತ್ರ ಮಿತ್ರ ಭಾನೊ ಸಹಸ್ರಕಿರಣ ಕರ್ಣಸೂನೊ ಕ್ರೂರಪಾಪಹರರಕ್ಶ್ನೊ ಗುರುಗುಹಮೊದಿತಸ್ವಭಾನೊ ಸೂರಿಜನೆದಿತ ಸುದಿನಮಣೆ ಸೋಮಾದಿಗ್ರಹಶಿಖಾಮಣೆ ಧೀರಾರ್ಚಿತ 
ಕರ್ಮಸಾಕ್ಷಿಣೆ ದಿವ್ಯತರಸಪ್ತಾಶ್ವರಥಿನೆ ಸೌರಾಷ್ಟ್ರ ಮಂತ್ರಾತ್ಮನೆ ಸೌವರ್ಣಸ್ವರೂಪಾತ್ಮನೆ ಭಾರತೀಶಹರಿಹರಾತ್ಮನೆ ಭುಕ್ತಿಮುಕ್ತಿವಿತರಣಾತ್ಮನೆ


ಈ ಜಗತ್ತಿನ ಒಡೆಯನಾದ ’ಸೂರ್ಯ’ ಎಲ್ಲಾ ಜೀವರಾಶಿಗಳ ಇರುವಿಕೆಗೆ ಕಾರಣಿಭೂತನಾದವನು.ಛಾಯಾಧಿಪತಿಯಾದ ಇವನು,ಜಗತ್ತಿನ ನಿಯಾಮಕ.ಸೂರ್ಯನ ಬೆಳಕು ಮತ್ತು ಛಾಯೆ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ.

ಸೂರ್ಯನು ’ಕಾರ್ಯಕಾರಣಾತ್ಮಕಜಗತ್ಪ್ರಕಾಶ’,ಎಂದರೆ ಅವನು ಜಗತ್ತಿನ ಎಲ್ಲಾ ಕಾರ್ಯಗಳ ನಿಯಾಮಕ.
ವೈಜ್ನಾನಿಕ ಹಿನ್ನೆಲೆ: ಸೌರಮಾರುತದ ವಿದ್ಯುತ್ ಕಣಗಳು,ಭೂಮಿಯ ಕಾಂತಕ್ಷೆತ್ರದ ಒಳಗಿದ್ದು,ಹಾನಿಕಾರಕ ಬಾಹ್ಯಾಕಾಶದ ವಿಕರಣಗಳನ್ನು ತಡೆಗಟ್ಟಲು ಗುರಾಣಿಯಂತಿದೆ.
ಗಿಡ ಮರಗಳಲ್ಲಿನ ದ್ಯುತಿಸಂಶ್ಲೆಷಣೆಗೆ ಸೂರ್ಯಕಿರಣಗಳು ಕಾರಣವಾಗಿವೆ.
ಸೂರ್ಯನ ವೇಳಾಪಟ್ಟಿಯಲ್ಲಿ ಸ್ವಲ್ಪ ಅದಲು-ಬದಲು ಆದ ಪಕ್ಷದಲ್ಲಿ,ನಮ್ಮ ಜೀವನ ಚಕ್ರ ಮತ್ತು ಪರಿಸರದ ವ್ಯವಸ್ಥೆಯು ಮುರಿದು ಬೀಳುವುದರ ಬಗ್ಗೆ ಸಂಶಯವೇ ಇಲ್ಲ(ಪಾಶ್ಚಾತ್ಯ ದೇಶಗಳಲ್ಲಿ, ಸೂರ್ಯನ ಮಹತ್ವದ ಅರಿವು ಕೈಗಾರಿಕ/ಔದ್ಯೊಗಿಕ ಕ್ರಾಂತಿಯ ಕಾಲದ(೧೯ನೇ ಶತಮಾನ) ನಂತರ ಮೂಡಿ ಬಂದಿದೆ).

ಸಿಂಹರಾಶ್ಯಾಧಿಪತಿ’ಯಾದ ಸೂರ್ಯನು,ಸಿಂಹ ರಾಶಿಯ ಸಮೂಹದ ಅಧಿಪತಿ.
ವೈಜ್ನಾನಿಕ ಹಿನ್ನೆಲೆ: ’ಬೇಸಿಗೆ ಸಂಕ್ರಾಂತಿ’ಯ ಕಾಲದಲ್ಲಿ ಸೂರ್ಯನು ಸಿಂಹ ರಾಶಿಯ ಸಮೂಹದ ಕಡೆಗೆ ತಿರುಗುತ್ತಾನೆ.
’ಬೇಸಿಗೆ ಸಂಕ್ರಾಂತಿ’ ಎಂದರೆ, ಭೂಮಿಯ ಅರೆ ಅಕ್ಷರೇಖೆಯು ಉತ್ತರ ಅಥವಾ ದಕ್ಷಿಣ ಗೋಳಾರ್ಧವು, ಸೂರ್ಯನ ಕಡೆಗೆ ಅಧೀನವಾಗುವುದು. ಈ ಸಿದ್ಧಾಂತವು ಗ್ರೀಕರಿಂದಲೂ ಸಾಬೀತಾಗಿದೆ.

’ಆರೋಗ್ಯಾಧಿ ಫಲದ ಕೀರ್ತೆ’ ಎಂದರೆ ಸೂರ್ಯನು ನಮ್ಮ ಆರೋಗ್ಯ ಸುಧಾರಣೆಗೆ ಕಾರಣ.
ವೈಜ್ನಾನಿಕ ಹಿನ್ನೆಲೆ: ಸೂರ್ಯನ ಕಿರಣಗಳ ಮೂಲಭೂತ ಕ್ರಿಯೆ ಎಂದರೆ,ನಮ್ಮ ದೇಹದ ಉಪಾಪಚಮಿ ಚಟುವಟಿಕೆಗಳಾದ ದೇಹದ ಶೀತೋಷ್ಣವನ್ನು ಹದದಲ್ಲಿಡುವುದು ಹಾಗು ನೈಸರ್ಗಿಕ ಛಂದೋಗತಿಯನ್ನು ಕ್ರಮಪಡಿಸುವುದು.
ಆಧುನಿಕ ವೈಜ್ನಾನಿಕ ಸಂಶೋಧನೆಗಳ ಪ್ರಕಾರ, ಸೂರ್ಯನ ಕಿರಣಗಳಿಗೆ ನಮ್ಮ ದೇಹವನ್ನು ತೆರೆವುದರಿಂದ ಅನೇಕ ಆರೋಗ್ಯದ ಫಲಗಳಿವೆ. ಅವೇನೆಂದರೆ ಕ್ಯಾನ್ಸರ್ ನಿರ್ಮೂಲನೆ, ಆಲ್ೞೀಮರ್ಸ್ ಕಾಯಿಲೆಗೆ ಗುಣ, ಸೌಮ್ಯ ಖಿನ್ನತೆ ಸುಧಾರಣೆ, ನಿದ್ರೆಯ ಗುಣಮಟ್ಟ ಸುಧಾರಣೆ ಇತ್ಯಾದಿ.
ನಮ್ಮ ದೇಹದ ಆರೋಗ್ಯವನ್ನು ಪ್ರತಿಕ್ಷಣವು ಕಾಪಾಡುವುದು ಅನಿಶ್ಚಿತತೆ ಇಲ್ಲದೆ ’ಸೂರ್ಯನ ಕಿರಣ’ಗಳೇ ಎಂದು ಭಾವಿಸಬಹುದು.

ಸಾರಸಮಿತ್ರ’ನಾದ ಸೂರ್ಯನು ಕಮಲದ ಅರಳುವಿಕೆಗೆ ಕಾರಣ.
ವೈಜ್ನಾನಿಕ ಹಿನ್ನೆಲೆ: ಸಸ್ಯಶಾಸ್ತ್ರ ಸಂಶೋಧನೆಗಳ ಪ್ರಕಾರ,ಕಮಲದ ಗಿಡ ಉನ್ನತ ಮಟ್ಟದ ಸೂರ್ಯನ ಕಿರಣಗಳಿಂದ,ಮೊಳಕೆಯಿಂದ ಕಾಂಡವಾಗುವುದು.
ಕಮಲವು ಪ್ರಕಾಶಮಾನ ವಾತಾವರಣದಲ್ಲಿ ಮಾತ್ರ ಹೂವಾಗುವುದು.ಎಲ್ಲಾ ಗಿಡಗಳು ಇದೇ ರೀತಿ ಪ್ರತಿಧ್ವನಿಸುತ್ತದೆ.

’ಸೋಮಾದಿಗ್ರಹ ಶಿಖಾಮಣಿ’ಯಾದ ಸೂರ್ಯನು,ಚಂದ್ರ-ಗ್ರಹಗಳ ಅಧಿಪತಿ.
ವೈಜ್ನಾನಿಕ ಹಿನ್ನೆಲೆ:ಸೂರ್ಯನ ಬೆಳಕೊಂದೇ ಚಂದ್ರನ ಬೆಳಕಿಗೆ ಕಾರಣ. ಸೂರ್ಯ-ಚಂದ್ರರ ನಡುವಿನ ಅಂತರವು,ಚಂದ್ರನ ಬೆಳಕಿನ ತೀವ್ರತೆಯನ್ನು ನಿಶ್ಚಯಿಸುವುದು. ಇರುಳಲ್ಲಿ ಚಂದ್ರನು ಸೂರ್ಯನ ಕನ್ನಡಿಯಂತೆ ಇರುವನು. ಆದ್ದರಿಂದ ಚಂದ್ರನು ಸ್ವಯಂಪ್ರಕಾಶಮಾನನಲ್ಲ. ಎಲ್ಲಾ ಗ್ರಹಗಳ ಸ್ಥಾನವು ಸೂರ್ಯನ ಗುರುತ್ವ ಬಲದಿಂದ ನಿಶ್ಚಿತವಾಗುವುದು.
’ಧೀರಾರ್ಚಿತ ಕರ್ಮ ಸಾಕ್ಷಿಣೆ’ ಎಂದರೆ ಬ್ರಹ್ಮಾಂಡದ ಎಲ್ಲಾ ಕಾರ್ಯಗಳ ಸಾಕ್ಷಿಯಾಗಿ ನಿಂತಿರುವವನು ಸೂರ್ಯನೊಬ್ಬನೆ.

’ದಿವ್ಯತರ ಸಪ್ತಾಶ್ವರಥಿನೆ’ ಎಂದರೆ, ಏಳು ರಥಗಳ ಸಾರಥಿ.


ವೈಜ್ನಾನಿಕ ಹಿನ್ನೆಲೆ: ಹಿಂದೂ ಧರ್ಮದ ಪ್ರಕಾರ, ಏಳು ಕುದುರೆಗಳೆಂದರೆ ಏಳು ಚಕ್ರಗಳು ಹಾಗು ಕಾಮನ ಬಿಲ್ಲಿನ ಏಳು ಬಣ್ಣಗಳು.ಸೂರ್ಯನ ಕಿರಣಗಳು ಏಳು ಬಣ್ಣಗಳಾಗಿ ವಿಭಜಿಸುವ ಸಿದ್ಧಾಂತದ ಸ್ಪಶ್ಟೀಕರಣ.
೭ ಚಕ್ರಗಳೆಂದರೆ ನಮ್ಮ ದೇಹದ ನಾಡಿಗಳನ್ನು ಸಂಧಿಸುವ ೭ ಬಿಂದುಗಳು. ಸಹಸ್ರಾರ,ಆಜ್ನೇಯ,ವಿಶುದ್ಧ,ಅನಾಹತ,ಮಣಿಪುರ,ಸ್ವಾಧಿಷ್ಟಾನ,ಮೂಲಾಧಾರ ಇವು ನಮ್ಮ ದೇಹದ ೭ ಚಕ್ರಗಳು.

’ಸೌರಾಷ್ಟ್ರ ಮಂತ್ರಾತ್ಮನೆ’:ಸೌರಾಷ್ಟ್ರ ರಾಗವು ಈ ಕೃತಿಯ ರಾಗವಾಗಿದ್ದು, ೧೭ನೇ ಮೇಳಕರ್ತವಾದ ಸೂರ್ಯಕಾಂತಿ ರಾಗದ ಜನ್ಯ ರಾಗವಾಗಿದೆ.

ಈ ಕೃತಿಯು ’ಸೂರ್ಯ’ನ ಕುರಿತು ಹೇರಳವಾದ ಪ್ರಮಾಣದಲ್ಲಿ ಜ್ನಾನ ನೀಡುವುದು.
ಕರ್ನಾಟಕ ಸಂಗೀತದ ವೈಜ್ನಾನಿಕ ಹೋಲಿಕೆಯನ್ನು ವಿಶದಗೊಳಿಸುತ್ತದೆ.





No comments:

Post a Comment