Monday, September 29, 2014

Dikshitar's Navagraha Krithis and their scientific significance- Chandram BhajaManasa(MOON)(Kannada Translation)

          ಚಂದ್ರಂ ಭಜ ಮಾನಸ      ಮಠ್ಯ ತಾಳ       ರಾಗ-ಅಸಾವೇರಿ

ತಾರುಣ್ಯದ ಗುರುತಾಗಿ ನಿಂತಿರುವ ಚಂದ್ರನನ್ನು ಮನುಷ್ಯನ ಮನಸ್ಸಿಗೆ ಸಂಬಂಧಿಸಲ್ಪಡುತ್ತದೆ. ಹಿಂದೂ ಧರ್ಮದಲ್ಲಿ,ಚಂದ್ರನನ್ನು ಒಂದು ಗ್ರಹವೆಂದು ಪರಿಗಣಿಸಿ, ಒಂದು ಶಿಶುವಿನ ಜನನಕ್ಕೆ ಅತ್ಯುತ್ತಮ ಗ್ರಹವೆಂದು ಹೇಳಲಾಗುತ್ತದೆ.

ಈ ಕ್ರುತಿಯಲ್ಲಿರುವ ಚಂದ್ರನಿಗೆ ಸಂಬಂಧಪಟ್ಟ ವೈಜ್ನಾನಿಕ ಹೋಲಿಕೆಗಳನ್ನು ನೋಡೋಣ.
ಷೋಡಶ ಕಲಾಧರಂ ನಿಶಾಕರಂ, ಎಂದರೆ, ಚಂದ್ರನಿಗೆ ೧೬ ಮುಖಗಳು ಮತ್ತು ಇರುಳಿಗೆ ಕಾರಣನಾದವನು.
ಒಂದು ತಿಂಗಳಲ್ಲಿ ಬರುವ ದಿನಗಳ ಗುಣಾಕಾರಕ್ಕೆ ಈ ೧೬ ಮುಖಗಳೇ ಕಾರಣ.
ಹಿಂದೂ ಪಂಚಾಂಗದ ಪ್ರಕಾರ, ಓಂದು ತಿಂಗಳ ಅವಧಿಯಲ್ಲಿ ೨ ಪಕ್ಷಗಳು ಇರುವವು(ಕೃಷ್ಣ ಮತ್ತು ಶುಕ್ಲ).
ಪ್ರತಿ ದಿನವು ಚಂದ್ರನ ಹೊಸ ಮುಖವನ್ನು ಕಾಣಬಹುದು, ೧೬ನೇ ದಿನ, ಚಂದ್ರನು ಅದ್ರುಶ್ಯನಾಗುವನು(ಅಮಾವಾಸ್ಯ).
೧೬ ಮುಖಗಳನ್ನು ’ಶ್ರೀ ಚಕ್ರ’ದಲ್ಲಿಯೂ ಉಲ್ಲೇಖಿಸಲಾಗಿದೆ.ಚಂದ್ರನ ಮುಖ ಭೂಮಿಯ ಮೇಲಾಗುವ ಮಳೆ-ಬೆಳೆಯ ಮೇಲೆ ಪರಿಣಾಮ ಬೀರುತ್ತದೆ

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಭೂಮಿಯ ಅಂತರ್ಜಲ ಮತ್ತು ಚಂದ್ರನ ಮುಖ,ಇವುಗಳ ನಡುವೆ ಸಂಬಂಧವನ್ನು ಧ್ರುಢಪಡಿಸಿದ್ದಾರೆ. ಭೂಮಿಯ ತಳದಲ್ಲಿ ತಂಗುವುದರ ಏರಿಕೆಯನ್ನು ’ಕ್ವಾರ್ಟೆರ್ ಮೂನ್’ನ ಮೊದಲು ಕಂಡು ಬಂದಿದೆ.
ಹುಣ್ಣಿಮೆ ಅಥವಾ ಅಮಾವಾಸ್ಯೆಯ ನಂತರ, ಮಳೆ ಬೀಳುವುದರಲ್ಲಿ ಏರಿಕೆಯನ್ನು ಕಂಡಿರುವುದು ದಾಖಲಿಸಲಾಗಿದೆ.
ಹುಣ್ಣಿಮೆಯಂದು ರೈತನು ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಗಿಡಗಳ ಬೆಳವಣಿಗೆಯಲ್ಲಿ ಸುಧಾರಣೆ ಕಂಡು ಬಂದಿರುವ ದಾಖಲೆಗಳಿವೆ.
ಇದೇಕೆಂದರೆ, ಚಂದ್ರನ ಗುರುತ್ವಕ್ಕೆ, ಭೂಮಿಯ ಅಂತರ್ಜಲವನ್ನು ತನ್ನ ಕಡೆಗೆ ಎಳೆಯುವ ಶಕ್ತಿ ಇದೆ. ಚಂದ್ರನ ಕಣ್ಣಕುಳ, ಭೂಮಿಯ ಕಾಂತವಲಯವನ್ನು ತಿರುಚುವ ಸಾಧ್ಯತೆ ಇದ್ದು, ಕಾಂತವಲಯದ ಅಯಾನೀಕೃತ ಕಣಗಳು ಹಾಗು ಬಾಹ್ಯಾಕಾಶದ ಕಣಗಳು, ಭೂಮಿಯ ವಾಯುಮಂಡಲದಲ್ಲಿ ಸೇರಿ,ಮೋಡಗಳ ಜೊತೆ ಘರ್ಷಣೆಯಾಗಿ, ಮಳೆ ಸುರಿಯುವುದು ಎಂಬ ಒಂದು ಸಿದ್ದಾಂತವನ್ನು ನಂಬಲಾಗಿದೆ.
ಶಶಾಂಕಂ ಎಂದರೆ ಚಂದ್ರನ ಮೇಲಿರುವ ಕಪ್ಪು ತೇಪೆಗಳು, ಮೊಲದಂತೆ ಕಂಡುಬರುತ್ತದೆ. ಈ ಸಿದ್ದಾಂತವನ್ನು ಅನೇಕ ಸಂಸ್ಕೃತಿಗಳು ವಿಶ್ವದಾದ್ಯಂತ ನಂಬಲಾಗುತ್ತದೆ.
ಶೀತ ಕಿರಣ: ಚಂದ್ರನ ಕಿರಣಗಳು ಸ್ವಭಾವತಃ ತಂಪು. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಚಂದ್ರನ ಮೇಲಿರುವ ತಾಪಮಾನ ಅತಿ ಕಡಿಮೆಯಾಗಿರುವುದರಿಂದ,ಇಡೀ ಸೌರಮಂಡಲದ ಇನ್ಯಾವ ಗ್ರಹದಲ್ಲೂ ಇಷ್ಟು ತಂಪು ಕಂಡು ಬರದಿರುವ ದಾಖಲೆಗಳಿವೆ.
ಚಂದ್ರನ ಮೇಲಿರುವ ತಾಪಮಾನ ಅತಿ ಕಡಿಮೆ ಎಂದರೆ ಸುಮಾರು -೨೪೯ (೨೬).

ಪಂಕಜ ರಿಪುಂ: ಕಮಲವು ಅರಳುವುದು ಸೂರ್ಯನ ಬೆಳಕಿನಲ್ಲಿ ಮಾತ್ರ,ಹಾಗೂ ಇರುಳಲ್ಲಿ ಅದು ಮರೆಯಾಗುವುದು ಎಂದು ಸಸ್ಯಶಾಸ್ತ್ರ ಹೇಳುತ್ತದೆ.
ರೋಹಿಣಿ ಪ್ರಿಯಕರಂ ಚತುರಂ: ರೋಹಿಣಿ ನಕ್ಷತ್ರಕ್ಕೆ ಪ್ರಿಯವಾದ. ರೋಹಿಣಿ ನಕ್ಷತ್ರದ ಖಗೋಳನಾಮ, ಆಲ್ಡೇಬರಾನ್ ಎಂದು. ವೈಜ್ಯಾನಿಕ ದಾಖಲೆಗಳ ಪ್ರಕಾರ,ಬ್ರಹ್ಮಾಂಡದಲ್ಲಿ ಈ ನಕ್ಷತ್ರವನ್ನು ಮರೆಮಾಡುವ ಶಕ್ಯತೆ ಚಂದ್ರನೊಬ್ಬನಿಗೆ ಮಾತ್ರ.

ಹೀಗೆ ಹಲವಾರು ರೀತಿಗಳಲ್ಲಿ,ಈ ಕೃತಿಯು ವೈಜ್ನಾನಿಕವಾಗಿ ಬಹಳಷ್ಟು ವಿಚಾರಗಳನ್ನು ತಿಳಿಸುತ್ತದೆ.
ಇಂತಹ ಒಂದು ಒಳಾರ್ಥವನ್ನು ಹೊಂದಿರುವ ’ನವಗ್ರಹ’ ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಆಸ್ತಿಯೇ ಎಂಬುದು ಖಚಿತ.




1 comment:

  1. Hi,

    Good Morning.

    Please put the english version of Moon as you did for sun.

    Regards
    Priya

    ReplyDelete