ಬುಧಂ ಆಶ್ರಯಾಮಿ
ರಾಗ-ನಾಟಕುರಂಜಿ ತಾಳ-ಮಿಶ್ರ ಝಂಪೆ
ಚಂದ್ರನ ಮಗನಂತೆ ನಿಂತಿರುವ ಬುಧನು
ಸೌರಮಂಡಲದ ಅತಿ ಚಿಕ್ಕ ಗ್ರಹ.
ಸೂರ್ಯನಿಗೆ ಅತಿ ಸಮೀಪವಾಗಿರುವ ಕಾರಣದಿಂದ
ಬುಧ ಗ್ರಹನ ತಾಪಮಾನ ಬಲು ಹೆಚ್ಚು.
ಈ ಕೃತಿಯಲ್ಲಿ ಕಂಡುಬರುವ ವೈಜ್ನಾನಿಕ
ಹಿನ್ನೆಲೆಯನ್ನು ನೋಡೋಣ.
ಚಂದ್ರತಾರಾಸುತಂ: ಚಂದ್ರ ಮತ್ತು
ತಾರೆಯ ಪುತ್ರ.
ವೈಜ್ನಾನಿಕ ಹಿನ್ನೆಲೆ: ಬುಧ-ಚಂದ್ರರ
ನಡುವೆ ಸಾಕಷ್ಟು ಸಾಮ್ಯತೆಗಳನ್ನು ನಾವು ಕಾಣಬಹುದು. ಅವೇನೆಂದರೆ:
೧. ವಾಯುಮಂಡಲ ರಹಿತ ಗ್ರಹಗಳು ಮತ್ತು
ಹೆಚ್ಚು ಕುಳಿಗಳು ಕಂಡುಬರುವುದು.
೨. ಈ ಗ್ರಹಗಳ ಚಿಕ್ಕ ಗಾತ್ರದ ಕಾರಣದಿಂದ,ಇದರ
ಮೇಲೆ ಹೆಚ್ಚು ಗುರುತ್ವವನ್ನು ಕಾಣಲು ಅಸಾಧ್ಯ.
೩. ತಾಪಮಾನದಲ್ಲಿ ಸಾಕಷ್ಟು ಏರಿಳಿತಗಳನ್ನು
ಕಾಣಬಹುದು.
೪. ಬುಧಗ್ರಹದ ಗರಿಷ್ಟ ಉಷ್ಣಾಂಶ
೪೨೭ ಡಿಗ್ರಿ, ಕನಿಷ್ಟ ಉಷ್ಣಾಂಶ -೧೭೦ ಡಿಗ್ರಿ ಹಾಗು ಚಂದ್ರನ ಮೇಲೆ ಗರಿಷ್ಟ ಉಷ್ಣಾಂಶ ೧೨೭ ಡಿಗ್ರಿ,
ಕನಿಷ್ಠ ಉಷ್ಣಾಂಶ -೧೭೦ ಡಿಗ್ರಿ.
No comments:
Post a Comment