Wednesday, January 21, 2015

Dikshitar's Navagraha Krithis and their scientific aspects-SriShukra Bhagavantham(VENUS)(Kannada Translation)

                            ಶ್ರೀ ಶುಕ್ರಭಗವಂತಂ
ರಾಗ-ಫ಼ರಜ್                                                   ಖಂ. ಅಟ್ಟತಾಳ

ಸೌರಮಂಡಲದ ಪ್ರಕಾಶಮಾನವಾದ ಗ್ರಹವೆಂದರೆ ಶುಕ್ರಗ್ರಹ.
೨೦ ವರ್ಷಗಳ ’ದೆಶೆ’ಯನ್ನು ಅನುಭವಿಸಲು ಸಾಧ್ಯ ಪಡಿಸುವಂತಹ ಗ್ರಹವಿದು.
ಈ ಕೃತಿಯಲ್ಲಿ ಶುಕ್ರನ ಚಲನವಲನಗಳ ಕುರಿತು ಬಹಳಷ್ಟು ವೈಜ್ನಾನಿಕ ಸಾಕ್ಷ್ಯಾಧಾರವನ್ನು ಕಾಣಬಹುದು.

ಧವಳಗಾತ್ರಂ: ಬಿಳಿ ಬಣ್ಣದ ದೇಹ.

ಶುಕ್ರ ಗ್ರಹದ ಬೆಳಕು ಎಷ್ಟೆಂದರೆ, ಭೂಮಿಯ ಮೇಲೆ ಛಾಯೆಗಳನ್ನು ಸೃಷ್ಟಿಸುವಂತಹದ್ದು.

ವಕ್ರ : ಶುಕ್ರನ ಚಲನವಲನವು ಮಿಕ್ಕ ಗ್ರಹಗಳ ಬದಲಿಗೆ ವಿರುದ್ಧ ಗತಿಯನ್ನು ಹೊಂದಿರುವಂತಹದ್ದು.
ಖಗೋಳ ಶಾಸ್ತ್ರದ ಪ್ರಕಾರ, ಈ ಚಟುವಟಿಕೆ ದಾಖಲೆಯಾಗಿದೆ.

ಈ ರೀತಿಯಲ್ಲಿ ಶುಕ್ರನ ಚಲನವಲನ, ಹೊಳಪಿನ ತೀವ್ರತೆ ಹಾಗು ಓರೆಯಲ್ಲಿನ ವಿವರಗಳನ್ನು ನಾವು ಕಾಣಬಹುದು.

No comments:

Post a Comment