Thursday, January 22, 2015

Dikshitar's Navagraha Krithis and their scientific significance- Diwakara tanujam(SATURN)(Kannada Translation)

                             ದಿವಾಕರ ತನುಜಂ 
                 ರಾಗ - ಯದುಕುಲಕಾಂಭೋದಿ  /ಏಕ ತಾಳ 

ಸೂರ್ಯ ಹಾಗು ಛಾಯೆಯ ಪುತ್ರನೆಂದು ಪರಿಗಣಿಸಿದ ಶನಿ ಗ್ರಹವು, ಸೌರಮಂಡಲದ ’ಬಾಹ್ಯ ಗ್ರಹ’ಗಳಲ್ಲಿ ಒಂದು.
ಶನಿಯ ಪರಿಣಾಮ ಜೀವರಾಶಿಗಳ ಮೇಲೆ ವೈಜ್ನ್ಯಾನಿಕವಾಗಿ ಹೇಗಾಗಬಹುದೆಂದು ಈ ಕೃತಿಯ ಮೂಲಕ ತಿಳಿದುಕೊಳ್ಳಬಹುದು.

ಶನೈಶ್ಚರಂ : ಸಾವಕಾಶವಾಗಿ ಚಲಿಸುವ ಗ್ರಹ.

ವೈಜ್ನ್ಯಾನಿಕ ಹಿನ್ನೆಲೆ: ಶನಿ ಗ್ರಹವು ಒಂದು ರಾಶಿ ಚಕ್ರವನ್ನು ಸಂಚರಿಸುವುದಕ್ಕೆ ೨.೫ ವರ್ಷಗಳ ಕಾಲ ಹಾಗು ಸೂರ್ಯನ ಸುತ್ತ ಒಂದು ಸರದಿ ಬಳಸಲು ೨೯ ವರ್ಷಗಳ ಕಾಲ ಆಗುವುದು.

ಭಯಂಕರಂ ಅತಿಕ್ರೂರ ಫಲದಂ: ಲೌಕಿಕ ಬದುಕಿನಲ್ಲಿ ಮುಳುಗುವವರಿಗೆ ಅತಿ ಕ್ರೂರವಾದ ಫಲಗಳನ್ನು ನೀಡುವ.

ವೈಜ್ಯ್ನಾನಿಕ ಹಿನ್ನೆಲೆ: ನಮ್ಮ ದೇಹದ ಒಂದೊಂದು ಚಕ್ರವು ಒಂದೊಂದು ಬಣ್ಣದಿಂದ ಪುಲಕಿತಗೊಳ್ಳುತ್ತದೆ.
ಶನಿಗ್ರಹವು ಸೂರ್ಯರಶ್ಮಿಯ ವರ್ಣಾಟಲಿನಲ್ಲಿ ’ವಿ’ಬಾನ್ಡ್ ಅನ್ನು ಪ್ರತಿಬಿಂಬಿಸುತ್ತದೆ.
’ವಿ’ ಬಣ್ಣದ ತರಂಗಾಂತರವು ಅತಿ ಕಡಿಮೆ  ಇರುವುದರಿಂದ ನಮ್ಮ ದೇಹದ ಅಂಗಾಂಗಗಳ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ, ’ವಿ’ ಬಣ್ಣವನ್ನು ಕ್ರೂರಫಲಗಳನ್ನು ಕೊಡುವ ಬಣ್ಣವೆಂದು ಪರಿಗಣಿಸಬಹುದು.

ಭವಾನೀಶಕಟಾಕ್ಷಪಾತ್ರಭೂತ ಭಕ್ತಿಮಯಂ ಅತಿಶಯಶುಭಫಲದಂ: ಈಶ್ವರನ ಕಟಾಕ್ಷಕ್ಕೆ ಪಾತ್ರರಾದ ಭಕ್ತರಿಗೆ ಹೆಚ್ಚಾದ ಶುಭ ಫಲಗಳನ್ನು ಕೊಡುವ.
ವೈಜ್ಯ್ನಾನಿಕ ಹಿನ್ನೆಲೆ:

’ VIOLET’ ಬಣ್ಣವು ನಮ್ಮ ದೇಹದ ’CROWN ’ ಚಕ್ರವನ್ನು ಅಂದರೆ ’ಸಹಸ್ರಾರ’ ಚಕ್ರವನ್ನು ಸಕ್ರಿಯಗೊಳಿಸುತ್ತದೆ.
ಸಹಸ್ರಾರ ಚಕ್ರವು, ಕಾಸ್ಮಿಕ್ ಪ್ರಜ್ನ್ಯೆಯನ್ನು ಉಂಟುಮಾಡುವ ಚಕ್ರ. ಇತ್ತೀಚಿನ ವೈಜ್ಯ್ನಾನಿಕ ದಾಖಲೆಗಳ ಪ್ರಕಾರ ’Violet Flame Meditation’ ಎಂಬ ಚಿಕಿತ್ಸಾಕ್ರಮವನ್ನು, ನಮ್ಮಲ್ಲಿನ ಅಲೌಕಿಕ ಚಿಂತನೆಯನ್ನು ಮೂಡಿಸುವುದಕ್ಕೆ ಬಳಸುತ್ತಾರೆ.
ಲೌಕಿಕ ಪ್ರಪಂಚ ’ಮೂರನೆಯ ಆಯಾಮ’(3D)ದಲ್ಲಿ ಇರುವುದರಿಂದ, ಈ ಚಿಕಿತ್ಸೆಯಲ್ಲಿ, ’ಐದನೆಯ ಆಯಾಮಕ್ಕೆ’(5D) ನಮ್ಮನ್ನು ಕರೆದುಕೊಂಡು ಹೋಗುವ ಶಕ್ತಿ ಇದರಲ್ಲಿದೆ ಎಂಬುದು ನಂಬಿಕೆ. ಎಲ್ಲಾ ಐಹಿಕ ಚಿಂತನೆಗಳನ್ನು ಮರೆತು, ಕೇವಲ ದೈವದತ್ತ ಅನುಭವವನ್ನು ಮೂಡಿಸುವ ಯಾಂತ್ರಿಕ ಶಕ್ತಿ ’violet’ಬಣ್ಣಕ್ಕೆ ಸಾಧ್ಯ ಎನ್ನುವುದನ್ನು ದಾಖಲಿಸಿದ್ದಾರೆ. ಗರ್ವಪೀಡಿತ ಬದುಕು ಹಾಗು ಚಿಂತನೆಗಳಿಂದ ಮೇಲೆತ್ತುವ ಶಕ್ತಿ ಈ ಚಿಕಿತ್ಸೆಯಲ್ಲಿ ಕಂಡುಬಂದಿದೆ.

ನೀಲಾಂಶುಕ ಪುಷ್ಪ ಮಾಲಾವೃತಂ: ನೀಲ ವರ್ಣದ ಮಾಲೆಯನ್ನು ಧರಿಸುವ.

ವೈಜ್ಯ್ನಾನಿಕ ಹಿನ್ನೆಲೆ: ’ಕಾಸಿನಿ ಸ್ಪೇಸ್ ಕ್ರಾಫ಼್ಟ್’ ದಾಖಲೆಗಳ ಪ್ರಕಾರ, ಶನಿಗ್ರಹದ ಉತ್ತರ ಗೋಳಾರ್ಧವು ನೀಲಿ ಬಣ್ಣವುಳ್ಳುವುದು. ಇದಕ್ಕೆ ಕಾರಣ ಶನಿಗ್ರಹದ ಮೇಲಿನ ವಾತಾವರಣದ ಕಣಗಳು, ರಶ್ಮಿರೇಖೆಯಲ್ಲಿನ ’ನೀಲಿ’ ಬಣ್ಣವನ್ನು ಚೆದುರುತ್ತದೆ ಎಂಬುದು.


ಈ ಎಲ್ಲ ನಿದರ್ಶನಗಳನ್ನು ಪರಿಶೀಲಿಸಿದರೆ, ಶನಿಗ್ರಹದ ಪ್ರಾಕೃತಿಕ ವೈಶಿಷ್ಟ್ಯಗಳನ್ನು ಅತಿ ಸೂಕ್ಷ್ಮವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ ದೀಕ್ಷಿತರು.  

No comments:

Post a Comment